ಅರವಿಂದ ಎಂಬ ಅಂಕಿತನಾಮ ಹೊಂದಿದ ಶ್ರೀ ವಿ .ಎಸ್ ಕುಲಕರ್ಣಿ ಯವರು ೩-೩ -೧೯೨೮ ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ವನ್ನು ಮೊರಬದಲ್ಲಿಯೇ ಪೂರೈಸಿ.ಹಾಯ್ ಸ್ಕೂಲ್ ಶಿಕ್ಷಣವನ್ನು ಧಾರವಾಡಕ್ಕೆ ಬಂದು ವಿದ್ಯಾರಣ್ಯ
ಹಾಯ್ ಸ್ಕೂಲ್ ಸೇರಿದರು ಆಗ ಇವರಿಗೆ ಗುರುಗಳಾಗಿದ್ದವರು ಶ್ರೀ ಶಂ. ಬಾ . ಜೋಶಿ . ಎಲ್ . ಬಿ ಕುಲಕರ್ಣಿ ಮತ್ತು ಅಥೆಣೆಕರ ಮಾಸ್ತರುಗಳು ಅವರ ಪ್ರೋತ್ಸಾಹದಿಂದ ಸ್ವಂತ ಕೃತಿ ರಚನೆಗೆ ತೊಡಗುವುದರ ಜೊತೆಗೆ ಶಾಲೆಯ ಮ್ಯಾಗ್ ಝಿನ್ ಗೆ ಸಂಪಾದಕರಾಗಿ ಕೆಲಸ ಮಾಡಿದರು. ಹಾಯ್ ಸ್ಕೂಲ್ ಶಿಕ್ಷಣ ಮುಗಿದ ಮೇಲೆ ಬಿ. ಎ ಕಲಿಯುವ ಕಾಲೇಜಿಗೆ ಹೆಸರು ಹಚ್ಚಿದರು. ಅನಿವಾರ್ಯ ಕಾರಣಗಳಿಂದ ಶಿಕ್ಷಣ ವನ್ನು ಮುಂದುವರೆಸಲು ಆಗದೆ ಪುಣೆಗೆ ತೆರಳಬೇಕಾಯಿತು. ಅಲ್ಲಿ ಇಂಜಿನಿಯರಿಂಗ್ ಡ್ರಾಯಿಂಗ್ ಕೋರ್ಸಿನಲ್ಲಿ ತರಬೇತಿ ಹೊಂದಿದ ರು ಈ ತರಬೇತಿಯ ಆಧಾರದ ಮೇಲೆ ಕೇಂದ್ರ ಸರಕಾರದ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್ ( mes)
ಸೇರ್ಪಡೆಯಾದರು. ಕಾಲಾನುಕ್ರಮ ದಲ್ಲಿ ಬಡತಿ ಹೊಂದುತ್ತಾ ದೇಶದ ನಾನಾ ಪಟ್ಟಣಗಳಲ್ಲಿ ಸುತ್ತಾಡಿದರು ಸೇವಾ ಅವಧಿಯಲ್ಲಿ ( ಕರ್ನಾಟಕ ಹೊರತು ಪಡಿಸಿ ) ಮುಂಬಯಿ ಜಬ್ಬಲಪುರ, ದಿಲ್ಲಿ ., ವಿಶಾಖಪಟ್ಟಣ , ಕೊಚಿನ್ ಮುಂತಾದ ಸ್ಥಳಗಳಲ್ಲಿ ಸೇವೆ ಸಲ್ಲಿಸಿದರು. ಪುಣೆಯಿಂದ ಅಸಿಸ್ಟಂಟ್ ಆರ್ಕಿಟೆಕ್ಟ್...