ಭಾಸ್ಕರ ಹೆಗಡೆ ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಪ್ಪನಳ್ಳಿ ಗ್ರಾಮದಲ್ಲಿ. ಶಿರಸಿ ಮತ್ತು ಧಾರವಾಡದಲ್ಲಿ ಇವರ ಓದು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ದಿ ಏಶಿಯನ್ ಏಜ್ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿ, ಈಗ ಡೆಕ್ಕನ್ ಕ್ರಾನಿಕಲ್ ಪತ್ರಿಕೆಯಲ್ಲಿ ರಾಜಕೀಯ ಸಂಪಾದಕರಾಗಿರುವ ಭಾಸ್ಕರ ಅವರಿಗೆ ಬರವಣಿಗೆ ಹೊಸದಲ್ಲ. ಮೊದಲ ಕಥಾ ಸಂಕಲನ, ‘‘ಸುನಿತಾಗೆ ಮಲ್ಲಿಗೆ ಎಂದರೆ ಇಷ್ಟ’’ ೨೦೦೭ರಲ್ಲಿ ಬೆಳಕು ಕಂಡಿತು.