ಬಿದರಹಳ್ಳಿ ನರಸಿಂಹ ಮೂರ್ತಿ :
ಬಿದರಹಳ್ಳಿ ನರಸಿಂಹಮೂರ್ತಿ( ಜನನ: ೦೫. ೦೨. ೧೯೫೦.) ಕವಿ,ಕತೆಗಾರ,ಕಾದಂಬರಿಕಾರ,ನಾಟಕಕಾರ,ವಿಮರ್ಶಕ,ಸಂಪಾದಕ,ಅನುವಾದಕರು.
ಇವರು ಹೊಳೆಹೊನ್ನೂರಿನಲ್ಲಿ ಜನಿಸಿದರು.ಮುಂದೆ ಹೊನ್ನಾಳಿಯಲ್ಲಿ ನೆಲೆಸಿದರು.ಮೈಸೂರು ವಿಶ್ವವಿದ್ಯಾನಿಲಯದಿಂದ ಎಮ್.ಎ.ಪದವಿ ಪಡೆದ ಬಳಿಕ ಪಿ.ಜಿ.ಡಿ.ಇ.ಎಸ್.ಪದವಿಯನ್ನು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲ್ಯಾಂಗ್ವೇಜಸ್,ಹೈದ್ರಾಬಾದ್ ಇಲ್ಲಿಂದ ಪಡೆದರು.ಅಧ್ಯಾಪಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಪ್ರಾಂಶುಪಾಲರಾಗಿ ನಿವೃತ್ತರಾದರು.ಇವರು ಲೇಖಕರಾಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಹಲವು ಈ ಕೆಳಗಿನಂತಿವೆ.
ಪ್ರಕಟಿತ ಕೃತಿಗಳು :
ಕವಿತಾ ಸಂಕಲನಗಳು
ಕಾಡಿನೊಳಗಿದೆ ಜೀವ (೧೯೭೯)
ಸೂರ್ಯದಂಡೆ (೧೯೯೬)
ಅಕ್ಕಿಕಾಳು ನಕ್ಕಿತಮ್ಮಾ (೨೦೦೧)
ಭಾವಕ್ಷೀರ (೨೦೦೬)
ಕಥಾಸಂಕಲನಗಳು:
ಶಿಶು ಕಂಡ ಕನಸು (೧೯೯೩) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)
ಹಂಸೆ ಹಾರಿತ್ತು (೨೦೦೦) (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಕೃತಿ)
ಕಾದಂಬರಿ: ಹೊಳೆಮಕ್ಕಳು (೨೦೧೧)
ನಾಟಕ: ಮಹಾಗಾರುಡಿ (೨೦೦೯) ವಿಮರ್ಶೆ:
ಕಡಲಂತೆ ಕಾರಂತ (೧೯೯೭)
ಅರಿವಲಗು (೨೦೦೨)
ಶಿವಶಕ್ತಿ ಸಂಪುಟ (೨೦೧೧)
ವಿಸ್ತರಿಸುವ ವರ್ತುಲ (೨೦೧೧)
ಸಂಪಾದನೆ:
ಹೊನ್ನೇರು (೧೯೯೫)(ಹೊನ್ನಾಳಿ ತಾಲೂಕಿನ ಪ್ರಾತಿನಿಧಿಕ ಕವನ ಸಂಕಲನ)
ಬಾಲಲೀಲಾ ಮಹಾಂತ (೧೯೯೬)(ತತ್ವಪದಗಳು)...