ಸಿ. ಎನ್. ರಾಮಚಂದ್ರನ್ -
ಇಂಗ್ಲೀಷ ಭಾಷೆ ಸಾಹಿತ್ಯದಲ್ಲಿ ಪಿಎಚ್ಡಿ ಮತ್ತು ನ್ಯಾಯ ಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವಿಗಳನ್ನು ಪಡೆದಿರುವ ಡಾ.ಸಿ.ಎನ್.ರಾಮಚಂದ್ರನ್ ಭಾರತ ಹಾಗು ಹೊರ ದೇಶಗಳಲ್ಲಿ ಪ್ರಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿಭಾಗ ಮುಖ್ಯಸ್ಥರಾಗಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಇವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಮರ್ಶಕರಾಗಿ ಹೊಸ ಚಿಂತನೆಗಳಿಂದ ಹೊಸ ಆಯಾಮ ನಿರ್ಮಿಸಿದರು. ಇಂಗ್ಲೀಷ ನಲ್ಲಿ ಒಂಭತ್ತು ಮತ್ತು ಮತ್ತು ಕನ್ನಡದಲ್ಲಿ ಹದಿನಾರು ಕೃತಿಗಳನ್ನು ರಚಿಸಿದ್ದಾರೆ. ಎಮರಿಟಸ್ ಫೆಲೋಷಿಪ್, ಬಿರ್ಲಾ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇನಾಮದಾರ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಇವರಿಗೆ ದೊರಕಿವೆ. ಇತ್ತೀಚೆಗೆ ಇವರ ಆಖ್ಯಾನ ವ್ಯಾಖ್ಯಾನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.