ಶ್ರೀಮತಿ ದಾಕ್ಷಾಯಣಿ ಹೆಗಡೆ ಸೋಮನಮನೆ
ಶಿರಸಿ ತಾಲೂಕು ಬಪ್ಪನಕೊಡ್ಲಿನ ಸಾಹಿತ್ಯ-ಸಂಗೀತ-ದೈವ-ಧ್ಯಾನ-ಕೃಷಿ-ಸಂಸ್ಕಾರ-ಸಂಸ್ಕೃತಿ ಸಂಪನ್ನ ಪರಿಸರ-ಪರಿವಾರದಲ್ಲಿ ಜನನ ಮತ್ತು ಬಾಲ್ಯ ಜೀವನ. ತಂದೆ ಯೋಗಿ ಶ್ರೀ ಶಿವಾನಂದರು ಮತ್ತು ತಾಯಿ ಶ್ರೀಮತಿ ಪಾರ್ವತಿ. ಸೋಮನಮನೆಯ ವಿಶ್ವನಾಥ ಹೆಗಡೆಯವರ ಧರ್ಮಪತ್ನಿಯಾಗಿ ವೈವಾಹಿಕ ಜೀವನಾರಂಭ. ಶ್ರೀಮತಿ ದಾಕ್ಷಾಯಿಣಿ ವಿಶ್ವನಾಥ ಹೆಗಡೆ, ಸೋಮನಮನೆ ಇವರು ಸ್ವತಃ ಆಶು ಕವಯಿತ್ರಿ ಆಗಿದ್ದು, ಸ್ಫೂರ್ತಿಯಿಂದ ಹಲವಾರು ದೇವತಾ ಭಜನೆ, ಹಾಡುಗಳನ್ನು ರಚಿಸಿರುತ್ತಾರೆ. ಇದರ ಫಲಶ್ರುತಿಯಾಗಿ ಎರಡು ಭಾಗವಾಗಿ 'ಕವನ ಕುಂಕುಮಾರ್ಚನೆ' ಕೃತಿಯ ಲೋಕಾರ್ಪಣೆ-ಜನಮನ್ನಣೆ.