ಜಿ.ಎಸ್.ಆಮೂರ -
ಡಾ. ಶ್ರೀ. ಗುರುರಾಜ ಶ್ಯಾಮಾಚಾರ ಆಮೂರರು
(೦೮-೦೫-೧೯೨೫-)
ಈಗ ,ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ, ಡಾ. ಜಿ.ಎಸ್. ಆಮೂರ, ಸದಾ ಸಾಹಿತ್ಯಾಸಕ್ತರು. ಇವರ " ಭುವನದ ಭಾಗ್ಯ" ಎಂಬ ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಅಧ್ಯಾಪಕರಾಗಿದ್ದಾಗಲೆ‘ ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು.ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ(ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾಹಾಗು ಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.
ಸಾಹಿತ್ಯ ವಿಮರ್ಶಕರಸಾಲಿನಲ್ಲಿ ಅಮೂರರದು, ವಿಶಿಷ್ಟ ವ್ಯಕ್ತಿತ್ವ :
ಆಧುನಿಕ ಕನ್ನಡಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ. ಅಮೂರ ರವರು, ಕರ್ನಾಟಕ ರಾಜ್ಯಸರ್ಕಾರಪ್ರದಾನಮಾಡುವ, ಪಂಪ ಪ್ರಶಸ್ತಿವಿಜೇತರು. ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಪ್ರಾಕಾರಗಳಲ್ಲಿ ಪ್ರಕಾಂಡ ಪಂಡಿತರೆಂದು ಪರಿಗಳಿಸಲ್ಪಟ್ಟಿರುವ ಡಾ. ಅಮೂರರು, ಕನ್ನಡ ಸಾಹಿತ್ಯವನ್ನು ಇಂಗ್ಲೀಷ್ ಓದುಗರಿಗೆ ಪರಿಚಯಿಸಿದ್ದಾರೆ. ಇಂಗ್ಲೀಷ್ ಹೇಳಿಕೊಡುವ ಭಾಷೆಯಾದರೆ, ಬರೆಯುವುದು, ಕೃತಿರಚನೆಗಳು ಸಾಮಾನ್ಯವಾಗಿ ಕನ್ನಡ...