ಜಿ.ಆರ್.ಪರಿಮಾಳಾ ರಾವ್
ಚಿ || ಸೌ || ಪರಿಮಳಾರಾವ್ ಅವರು ಅಜನ್ಮ ಕಲಾಭವನ ಜೀವಿಗಳು, ಶಿವನು ತನ್ನ ದೇಹವನ್ನು ಎಂಟು ಭಾಗ ಮಾಡಿ ವಿಶ್ವಮಯವಾಗಿ ಹಂಚಿದ್ದಾನಂತೆ. ಅದರಂತೆ ಪರಿಮಳಾ ಅವರು ತಮ್ಮ ತ್ರಿಕರಣವನ್ನು ಸಾಹಿತ್ಯ, ಸಂಗೀತ, ಚಿತ್ರ, ನಾಟಕ, ಕೈಕುಶಲತೆ, ಕುಸರಿಕೆಲಸ, ಅಧ್ಯಾಪನ, ಅಧ್ಯಯನ, ಯೋಗ, ದಾರ್ಶನಿಕ ಶಾಸ್ತ್ರ ಇನ್ನೂ ಹತ್ತು ಹಲವು ಬಗೆಯಲ್ಲಿ ಹಂಚಿ ತಮ್ಮನ್ನು ಹರಹಿಕೊಂಡಿದ್ದಾರೆ. “ಎಲ್ಲದಕು ಸಲ್ಲುವರು ಒಂದೂ ಬಲ್ಲವರಲ್ಲ” ಎನ್ನುವಂತಲ್ಲ. ಎಲ್ಲರನ್ನೂ ಸಮರ್ಥಕವಾಗಿ ನಿರ್ವಹಿಸಬಲ್ಲರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಪಾಂಕ್ತವಾಗಿ , ಅಚ್ಚುಕಟ್ಟಾಗಿ , ಸುಂದರರಾಗಿ ನಿರ್ವಹಿಸಬಲ್ಲವರು.