ಗಿರಿಮನೆ ಶ್ಯಾಮರಾವ್
ಸಾಹಿತಿ. ವ್ಯಕ್ತಿತ್ವ ವಿಕಸನ ಲೇಖನಗಳು, ಕಾದಂಬರಿಗಳು, ಮಕ್ಕಳ ಸಾಹಿತ್ಯ ಚಿಂತನಗಳು, ನುಡಿಮುತ್ತುಗಳು ಇವು ಗಿರಿಮನೆ ಶ್ಯಾಮರಾವ್ ಬರಹ ಸಾಮಗ್ರಿಗಳು.
ಇದುವರೆಗೆ ಪ್ರಕಟವಾದ ಪುಸ್ತಕಗಳು ಇಪ್ಪತ್ತೆರಡು. ಕೆಲವನ್ನು ಬಿಟ್ಟರೆ ಎಲ್ಲವೂ ಪತ್ರಿಕೆಯಲ್ಲಿ ಬಂದ ನಂತರ ಪುಸ್ತಕ ರೂಪ ಪಡೆದವುಗಳು. ವರ್ಷಕ್ಕೆ ಮೂರು ಅಥವಾ ನಾಲ್ಕರಂತೆ ಕೃತಿಗಳನ್ನು ಹೊರತರುವುದು ಗುರಿ.
ಹಾಸನ ಜಿಲ್ಲೆಯ ಮಲೆನಾಡಿನ ಭಾಗವಾದ ಸಕಲೇಶಪುರ ಹುಟ್ಟೂರು. ಮೂಲ ದ.ಕನ್ನಡ ಜಿಲ್ಲೆ. ಮೂವತ್ತೈದು ವರ್ಷ ಕೃಷಿಕನಾಗಿ ಕಳೆದ ನೋವು - ನಲಿವುಗಳ ಬದುಕು; ಅದ್ಭುತವಾದ ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ; ಹತ್ತು ವರ್ಷ ಮೆಡಿಕಲ್ ಷಾಪ್ಎಂಬ ಔಷಧಿ ಜಗತ್ತಿನೊಳಗೆ ಮುಳುಗಿ ಎದ್ದ ಅನುಭವ; ಮತ್ತೈದು ವರ್ಷ ಮಕ್ಕಳ ಜೊತೆಗೆ ಕಳೆದ ಬೆರಗು; ಇವೆಲ್ಲದರ ಜೊತೆ ಜೊತೆಗೇ ಮನುಷ್ಯರ ಮನಸ್ಸಿನ ಅವಲೋಕನ; ಇವೇ ಸಾಹಿತ್ಯಕ್ಕೆ ಪ್ರೇರಕ.
ಹವ್ಯಾಸಿ ಪತ್ರಿಕಾ ಅಂಕಣಕಾರನಾಗಿ ಸಾಹಿತ್ಯ ಕ್ಷೇತ್ರಕ್ಕೆ ಇಳಿದವನಿಗೆ ಈಗ ಸಾಹಿತ್ಯವೇ ಬದುಕು. `ವ್ಯಕ್ತಿತ್ವವಿಕಸನ’ ಬರಹದ ಜೀವಾಳ. ಲೇಖನಗಳ ಹೊರತಾಗಿಯೂ ಬರೆದದ್ದೆಲ್ಲವೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿಯೇ ಇರಲಿ ಎಂಬ ಉದ್ದೇಶದಿಂದ ಸೃಷ್ಟಿಯಾಗಿದ್ದು.