ಗುಬ್ಬಚ್ಚಿ ಸತೀಶ್
೧೯೭೭ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನನ. ತುಮಕೂರಿನ ಶ್ರೀ ಸಿದ್ಧಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ಫಾರ್ ಬಾಯ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಂಪ್ಯೂಟರ್ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ ಇವರು, ಪ್ರಸ್ತುತ ತುಮಕೂರು ವೀರಶೈವ ಕೋ-ಆಪರೇಟಿವ್ ಬ್ಯಾಂಕ್, ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನ ಪ್ರೀತಿಯಿಂದಲೇ ಹೆಸರುವಾಸಿಯಾದ ಇವರು ತಮ್ಮ “ಮಳೆಯಾಗು ನೀ...” ಕವನ ಸಂಕಲನದಿಂದ ಪ್ರೇಮಕವಿ ಎಂದು ಚಿರಪರಿಚಿತರಾಗಿದ್ದಾರೆ. “ಮುಗುಳ್ನಗೆ” ಕಾದಂಬರಿ ಇವರ ಮತ್ತೊಂದು ಪುಸ್ತಕ. “ಸ್ನೇಹ ಮಾಡಬೇಕಿಂಥವಳ...” (ಲೇಖನಗಳ ಸಂಗ್ರಹ) ಇವರ ಮೂರನೇ ಪುಸ್ತಕ. ಹನ್ನೊಂದು ಕತೆಗಳ ‘ಉಘೇ ಉಘೇ’ ಇವರ ಮೊದಲ ಕಥಾಸಂಕಲನ.
೨೦೧೩ ರಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಡಾ|| ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಕಥಾಕಮ್ಮಟದಲ್ಲಿ ಮತ್ತು ಶ್ರೀ ನಾಗತಿಹಳ್ಳಿ ಚಂದ್ರಶೇಖರ್ರವರ ಚಿತ್ರಕಥಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ತುಮಕೂರಿನ ಕಣ್ಮುಚ್ಚಾಲೆ ಮಕ್ಕಳ ಗುಂಪಿನ ೨೦೧೧ನೇ ಸಾಲಿನ ರಾಜ್ಯಮಟ್ಟದ ಗಾಳಿಪಟ ಲೇಖನ ಸ್ಪರ್ಧಾ ವಿಜೇತ. ತುಮಕೂರು ಜಿಲ್ಲಾ ಲೇಖಕಿಯರ ಸಂಘದವತಿಯಿಂದ ನಡೆದ ೨೦೧೧ನೇ ಸಾಲಿನ ಕಥಾಸ್ಪರ್ಧೆಯಲ್ಲಿ ಮತ್ತು ೨೦೧೩ರ ಅನನ್ಯ ಪ್ರಕಾಶನದ...