ಗುರುರಾಜ ಭೀ. ಜೋಶಿ
ಪಂ. ಭೀಮಸೇನ ಜೋಶಿ ಅವರನ್ನು ಕುರಿತು ಅವರ ತಂದೆ ಗುರುರಾಜ ಭೀ. ಜೋಶಿ ಅವರು ಬರೆದ ಪುಸ್ತಕವಿದು. ತಂದೆಯು ಮಗನ ಬಗ್ಗೆ ಬರೆದ ಕೃತಿ ಇದಾಗಿದ್ದು ಭೀಮಸೇನ ಜೋಶಿ ಅವರ ಜೀವನದ ಪೂರ್ವ ರಂಗವನ್ನು ಎಳೆ ಎಳೆಯಾಗಿ ಬಿಡಿಸಿ ಇಟ್ಟಂತ ಕೃತಿ. ಭೀಮಸೇನ ಜೋಶಿ ಅವರ ಪ್ರಾರಂಭಿಕ ಸಂಗೀತದ ಜೀವನದಲ್ಲಿ ತಂದೆ, ಕಕ್ಕಂದಿರು ನೀಡಿದ ಸಹಾಯ ಹಸ್ತದ ವಿವರಗಳು ಇಲ್ಲಿವೆ. ಈ ದೃಷ್ಟಿಯಲ್ಲಿ ಇದೊಂದು ಅಪರೂಪದ ಪುಸ್ತಕ .