ಹ.ಶಿ .ಭೈರನಟ್ಟಿ :
ಇವರು ಮೇ ೨,೧೯೫೦ ಕುಲಗೋಡ ಗ್ರಾಮ ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದರು. ಎಮ್.ಎಸ್ ಸಿ . ಭೌತಶಾಸ್ತ್ರ ಪದವಿ ಪಡೆದಿದ್ದಾರೆ. ಇವರು ಎಲ್ಲೈಸಿ ಧಾರವಾಡ ವಿಭಾಗದಲ್ಲಿ ೩೭ ವರ್ಷ ವೃತ್ತಿ ಸಲ್ಲಿಸಿದ್ದಾರೆ.
ಸಲ್ಲಿಸಿದ ಇತರ ಸೇವೆಗಳು : ೧. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿವರ್ಷ ವಿಜ್ಞಾನ ಹಾಗೂ ಪ್ರಬಂಧ ಪುಸ್ತಕಗಳಿಗೆ ಕೊಡುವ ಪ್ರಶಸ್ತಿ ಕಾರ್ಯದಲ್ಲಿ ಕೆಲವು ವರ್ಷ ತೀರ್ಪುಗಾರರಾಗಿ ಹಾಗೂ ೨. ಕರ್ನಾಟಕ ರಾಜ್ಯವಿಜ್ಞಾನ ಪರಿಷತ್ತು ಏರ್ಪಡಿಸಿದ್ದ ವೈಜ್ಞಾನಿಕ ಕಥಾ ರಚನೆ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ
ಸನ್ಮಾನ : ವಿಜ್ಞಾನವನ್ನು ಜನಪ್ರಿಯಗೊಳಿಸಿದುದಕ್ಕಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ
ಕಲಬುರಗಿಯಲ್ಲಿ ಏರ್ಪಡಿಸಿದ್ದ ೬ನೇ ರಾಜ್ಯಮಟ್ಟದ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶದಲ್ಲಿ ೬-೨-೨೦೧೩ ರಂದು ಸನ್ಮಾನಿಸಲಾಗಿದೆ.