ಹನುಮಂತ ಹಾಲಿಗೇರಿ
೧೯೮೦ರಲ್ಲಿ ಬಾಗಲಕೋಟೆಯ ತುಳಸಿಗೇರಿಯಲ್ಲಿ ಜನನ. ಚಿಕ್ಕಂದಿನಲ್ಲಿ ಅಸಹನೀಯ ಬಡತನ ಮತ್ತು ಜಾತಿಯತೆಯಲ್ಲಿ ಕಮರಬೇಕಿದ್ದ ಮುಗುಳು ಅರಳಿದ್ದೇ ಹೆಚ್ಚು. ಬಾಲ್ಯದ ಸಂಜೆ, ಮುಂಜಾವುಗಳನ್ನು ಬಲಿಗೊಟ್ಟು ದುಡಿದು ಅಕ್ಷರ ದಕ್ಕಿಸಿಕೊಂಡ ಹೆಮ್ಮೆ. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕಲಿಯುತ್ತಿದ್ದ ಬಿ.ಎ. ಅರ್ಧಕ್ಕೇ ನಿಲ್ಲಿಸಿ ಸ್ವಲ್ಪ ದಿನ ಹೋರಾಟದ ಹುಚ್ಚು ಹಿಡಿಸಿಕೊಂಡು ಅಲೆದಾಟ. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಗ್ರಾಮೀಣ ಅಭಿವೃದ್ಧಿ ಪದವಿ. ಅದೇ ಅವಧಿಯಲ್ಲಿ ಎಸ್ಎಸ್ ವೈ ಟೀಚರ್ ಆಗಿ ಆಧ್ಯಾತ್ಮದ ಗೀಳಿನಿಂದಾಗಿ ಮೂರು ವರ್ಷಗಳವರೆಗೆ ಗ್ರಾಮೀಣ ಗುರುಕುಲಗಳನ್ನು ನಡೆಸುತ್ತಾ ಹಲವಾರು ಗ್ರಾಮೀಣ ಅಭಿವೃದ್ಧಿಯ ಪ್ರಯೋಗಗಳ ನಡೆ.
ಕೆಂಗುಲಾಬಿ ಕಾದಂಬರಿ, ಕತ್ತಲಗರ್ಭದ ಮಿಂಚು, ಮಠದ ಹೋರಿ ಕಥಾಸಂಕಲನಗಳು ಸೇರಿ ೩ ಕೃತಿಗಳು ಪ್ರಕಟಗೊಂಡಿವೆ. ದೇವರ ಹೆಸರಲ್ಲಿ ಮತ್ತು ಊರು ಸುಟ್ಟರೂ ಹನುಮಪ್ಪ ಹೊರಗ ಎಂಬ ನಾಟಕಗಳು ಅಚ್ಚಿನಲ್ಲಿವೆ. ಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪುರಸ್ಕಾರ, ಧಾರವಾಡದ ರಾಷ್ಟ್ರೀಯ ಬೇಂದ್ರೆ ಪ್ರತಿಷ್ಠಾನದಿಂದ ಬೇಂದ್ರೆ ಗ್ರಂಥ ಬಹುಮಾನ, ಬಿಎಂಟಿಸಿ ಅರಳು ಪ್ರಶಸ್ತಿ, ಹುನಗುಂದದ ಸಂಗಮ ಸಾಂಸ್ಕೃತಿಕ ಸಂಸ್ಥೆಯಿಂದ ಸಂಗಮ ಕಥಾ ಪುರಸ್ಕಾರ, ಧಾರವಾಡ ಮನ್ಸೂರು ಮಠದಿಂದ ಕನಕ ಸಾಹಿತ್ಯ ಸಮ್ಮಾನ ದಲಿತ ಸಾಹಿತ್ಯ ಪರಿಷತ್ತಿನಿಂದ ಶ್ರೇಷ್ಠ ಕೃತಿ ಪುರಸ್ಕಾರ ಮತ್ತು ಕಸಾಪದಿಂದ ಮೂರು ದತ್ತಿ ಪ್ರಶಸ್ತಿಗಳು ಲ...