ಹೊಳಲ್ಕೆರೆ ರಂಗರಾವ್ ಚಂದ್ರಶೇಖರ್
ಅಮೆರಿಕದ ಕೊಲಂಬಿಯ ರಾಜ್ಯದ ಮಿಸ್ಸೂರಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಇಲಾಖೆಯ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಭಾಷೆಯಲ್ಲಿ ಕಥೆ, ಕವನ, ಕಾದಂಬರಿ,ಪುರಾಣ,ಮಹಾಕಾವ್ಯಗಳನ್ನು ಅಭ್ಯಯಿಸಿ ಹಲವಾರು ಪತ್ರಿಕೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ. ೧೨ ನೇ, ಏಪ್ರಿಲ್ ೨೦೦೮ ರಂದು, ಅಮೆರಿಕದ, ’ಹೂಸ್ಟನ್ ಕನ್ನಡವೃಂದ,’ ದಲ್ಲಿ ತಾವು ಸಂಪಾದಿಸಿ ಪ್ರಕಟಿಸಿದ ಕರ್ಣಾಟಕ ಭಾಗವತ,ದ ಬೃಹತ್ ಕೃತಿಯ ೨ ಸಂಪುಟಗಳನ್ನು ಬಿಡುಗಡೆಮಾಡಿದರು. ಅಮೆರಿಕದ ಗೆಳೆಯರಿಗೆ ಚಂದ್ರ ಎಂದು ಪ್ರಸಿದ್ಧರಾಗಿರುವ ಅವರು, ಹಳೆ ಮೈಸೂರು ಸಂಸ್ಥಾನದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮದಲ್ಲಿ ೧೯೪೬ ರಲ್ಲಿ ಜನಿಸಿದರು. ಚಂದ್ರರವರ ತಂದೆ, ಎಚ್.ವಿ.ರಂಗರಾವ್, ಮತ್ತು ತಾಯಿ, ಸಂಪ್ರದಾಯಗಳ ಹಾಡಿನ ರಾಧಮ್ಮನವರು.
ಚಂದ್ರಾರವರ ಪೂರ್ವಜ, ಶ್ರೀ. ರಾಮಣ್ಣಯ್ಯನವರು, ಕ್ರಿ.ಶ.೧೭೫೫ ರಲ್ಲಿ, ಲಿಖಿಸಿದ ತಾಳೆಗರಿ ಕಟ್ಟು ಚಂದ್ರಶೇಖರ್ ಚಿಕ್ಕಪ್ಪನವರ ಮನೆಯ ದೇವರ ಕೋಣೆಯಲ್ಲಿ ಪೂಜಿಸಲ್ಪಡುತ್ತಿತ್ತು. ಅದನ್ನು ಕಂಡ ಅವರು ಅಮೆರಿಕಕ್ಕೆ ಕೊಂಡೊಯ್ದು ೧೦ ಸಾವಿರ ಪದ್ಯಗಳ ಲಿಪಿಯನ್ನು ಸಂಸ್ಕರಿಸಿ, ಪರಿಶೋಧಿಸಿ, ಸಂಪಾದಿಸಿ ೨ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಚಂದ್ರಶೇಖರ್ ಗೆ, ಬಾಲ್ಯದ ದಿನಗಳಿಂದಲೂ ತಾಯಿನುಡಿ-ಕನ್ನಡದ ಬಗ್ಗೆ ಅತೀವ ಆಸಕ್ತಿ, ಹಾಗೂ ಒಲವಿತ್ತು. ಅದಕ್ಕೆ ಪೂರಕವಾದ ಸಾಂ...