ಜಯಶ್ರೀ ಕಾಸರವಳ್ಳಿ
ಜಯಶ್ರೀ ಕಾಸರವಳ್ಳಿ ಹುಟ್ಟಿದ್ದು ೧೯೫೯ರಲ್ಲಿ, ಕಾಸರವಳ್ಳಿ ಹತ್ತಿರದ ಕೇಸಲೂರಿನಲ್ಲಿ. ಬಾಲ್ಯದ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮುಗಿಸಿ, ಮೈಸೂರು ವಿಶ್ಚವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಸುಮಾರು ವರುಷ ಚೆನೈನಲ್ಲಿ ನೆಲೆಸಿದ್ದ ಅವರು, ’ಭಾರತ್ ಸೀನಿಯರ್ ಸೆಕೆಂಡರಿ ಸ್ಕೂಲ್’ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ತಮ್ಮ ಪತಿಯೊಡನೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವಿಶಿಷ್ಠ ಸಂವೇದನೆಯ ಕತೆಗಾರ್ತಿಯೆಂದು ಹೆಸರು ಮಾಡಿರುವ ಜಯಶ್ರೀ ಅವರ ಮೊದಲ ಸಂಕಲನ ’ತಂತಿ ಬೇಲಿಯ ಒಂಟಿ ಕಾಗೆ’. ಮೊದಲಿನಿಂದಲೂ ಮಕ್ಕಳ ಕತೆಗಳಲ್ಲಿ ವಿಶೇಷ ಒಲವುಳ್ಳ ಜಯಶ್ರೀ ಅವರು ದೆಹಲಿಯ ಪ್ರತಿಷ್ಠಿತ ’ತುಲಿಕಾ’ ಪ್ರಕಾಶನ ಸಂಸ್ಥೆಗಾಗಿ ಸುಮಾರು ಮೂವತ್ತಕ್ಕು ಹೆಚ್ಚು ಮಕ್ಕಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬ್ರಹ್ಮನ ಚಿಟ್ಟೆ, ಗೋಡೆಯ ಮೇಲಿನ ನರ್ತನ, ಇಸ್ಮತ್ನ ಈದ್, ಕಪ್ಪು ಚಿರತೆ, ಭೂಮಿ ಹುಟ್ಟಿತು, ಬೋನ್ ಬೀಬೀಯ ಕಾಡಿನಲ್ಲಿ ಮುಂತಾದವುಗಳು. ಇದಲ್ಲದೇ ಮಾರ್ಕ್ವೆಸ್, ಜಮೈಕಾ ಕಿಂಕೇಡ್, ಆಲಿವರ್ ಸೀನಿಯರ್, ಮರಿಯಾ ಡೆರ್ಮೋತ್ರ ಕೆಲ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಯಶ್ರೀ ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಕರ್ನಾಟಕ ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ನ ಮಲ್ಲಿಕಾ ಪ್ರಶಸ್ತಿ, ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್...