ಕ. ಮ. ರವಿಶಂಕರ :
ಇವರು ಚಿತ್ರದುರ್ಗ ಜಿಲ್ಲೆಯವರು. ಇಂಜಿನಿಯರಿಂಗ್ ಪದವಿ ಶಿಕ್ಷಣ ಪಡೆದು ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಬಂಡ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಿಂದಲೂ ಪ್ರಗತಿಪರ ಚಿಂತಕರ ಒಡನಾಟದಲ್ಲಿ ಬೆಳೆದು ಬಂದ ಇವರು ದಲಿತ ಬಂಡಾಯ ಚಳುವಳಿಯ ಹಲವು ಮಜಲುಗಳ ಹೋರಾಟದಲ್ಲಿ ತೊಡಗಿದವರು ಮತ್ತು ನಾಸ್ತಿಕವಾದಿ ಚಿಂತನೆ ಬುದ್ಧ,ಬಸವ ವಿಚಾರಗಳಿಂದ ಪ್ರಭಾವಿತರಾದವರು.