ಕೆ. ಸತ್ಯನಾರಾಯಣ
೨೧ ಏಪ್ರಿಲ್, ೧೯೫೪ರಂದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಕೊಪ್ಪದಲ್ಲಿ ಹುಟ್ಟಿದ್ದು. ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಕಾನಾಮಿಕ್ಸ್ ಸ್ನಾತಕೋತ್ತರ ಪದವಿ. ೧೯೭೮ರಲ್ಲಿ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ನಾಗಪುರ ಬೆಂಗಳೂರು, ದಾವಣಗೆರೆ, ಚೆನ್ನೈ, ಗುಂಟೂರು, ಹೈದರಾಬಾದ್ ಕೊಲ್ಲಾಪುರ, ಮುಂಬೈ, ವಿಶಾಖಪಟ್ಟಣ ಗಳಲ್ಲಿ ಕೆಲಸ, ಮಾಡಿ ಸದ್ಯ ಬೆಂಗಳೂರಿನಲ್ಲಿ ಮುಖ್ಯ ಆದಾಯ ತೆರಿಗೆ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾದಂಬರಿ ಮತ್ತು ಪ್ರಬಂಧ ಪ್ರಕಾರಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿರುವ ಇವರ ಕಾದಂಬರಿ ಮತ್ತು ಸಣ್ಣ ಕತೆಯೊಂದು ದೂರದರ್ಶನಕ್ಕೆ ಚಿತ್ರೀಕರಣಗೊಂಡಿವೆ. ‘ನಕ್ಸಲ್ ವರಸೆ’ ಕಥಾ ಸಂಕಲನಕ್ಕೆ ಮಾಸ್ತಿ ಪುರಸ್ಕಾರ ಲಭಿಸಿದೆ.