ಡಾ|| ಕೆ.ಎಸ್. ನಾರಾಯಣಾಚಾರ್ಯ
೧೯೩೩ರಲ್ಲಿ ಕನಕಪುರದ (ಬೆಂಗಳೂರು ಜಿಲ್ಲೆ) ವೈದಿಕ ಶ್ರೀವೈಷ್ಣವ ಕುಟುಂಬದಲ್ಲಿ ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ., ಬಿ.ಎ. ಆನರ್ಸ್, ಎಂ.ಎ. (ಇಂಗ್ಲಿಷ್) ಪದವಿಗಳು (೧೯೫೪, ೧೯೫೭, ೧೯೫೮), ``ಡಬ್ಲ್ಯು.ಬಿ.ಯೇಟ್ಸ್ ಮತ್ತು ಟಿ.ಎಸ್. ಎಲಿಯೇಟ್ರ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವ’’- ಕ.ಆ. ನಿಬಂಧ- (೧೯೫೯-೬೧). ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕ (೧೯೬೧), ಪ್ರವಾಚಕ (೧೯೬೭), ಪ್ರಾಧ್ಯಾಪಕ (೧೯೭೩), ಪ್ರಾಚಾರ್ಯ (೧೯೯೧), ನಿವೃತ್ತಿ (೧೯೯೩), `ವೇದ ವಿದ್ಯಾ ಪ್ರಕಾಶನ’, `ಮಾಲೋಲ ಪ್ರಕಾಶನ’ ಸ್ಥಾಪನೆ. ವೇದ ಸಂಸ್ಕೃತಿ ಪರಿಚಯ (೩ ಬೃಹತ್ ಸಂ.) ಶ್ರೀರಾಮಾಯಣ ಸಾಹಸ್ರೀ, ಗೀತಾರ್ಥರತ್ನನಿಧಿ, ಶ್ರೀರಾಮಾಯಣ ಪಾತ್ರ ಪ್ರಪಂಚ, ಶ್ರೀಮಹಾಭಾರತ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ಶ್ರೀಕೃಷ್ಣಾವತಾರ (೨ ಸಂ.), ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ಅಗಸ್ತ್ಯ, ಆಚಾರ್ಯ ಚಾಣಕ್ಯ, ಮಹಾಮಾತೆ ಕುನ್ತೀ
ಕಂದೆರೆದಾಗ, ನಳ ದಮಯಂತೀ, ದಶಾವತಾರ, ರಾಜಸೂಯದ ರಾಜಕೀಯ,
ರಾಜಸೂಯ ತಂದ ಅನರ್ಥ, ವನದಲ್ಲಿ ಪಾಂಡವರು, ಶ್ರೀರಾಮಕಥಾವತಾರ, ಭಾರತೀಯ ಇತಿಹಾಸ ಪುರಾಣಗಳು, ಶ್ರೀಮಹಾಭಾರತ ಕಾಲ ನಿರ್ಣಯ, ಭಾರತ ಇಸ್ಲಾಂ ಮತ್ತು ಗಾಂಧಿ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಮತಾಂತರ: ಒಳ ಹೊರ ಆಯಾಮಗಳು, ರಾಷ್ಟ್ರೀಯತೆ ಮತ್ತು ಸಂಸ್ಕೃತಿ, ಸುಭಾಷರ ಕಣ್ಮರೆ...