ಕರಣಂ ಪವನ್ ಪ್ರಸಾದ್
ನಾಟಕಕಾರರಾಗಿ ಪರಿಚಿತವಿದ್ದ ಕರಣಂ ಪವನ್ ಪ್ರಸಾದ್, ’ಕರ್ಮ’ ಕೃತಿಯ ಮೂಲಕ ಕಾದಂಬರಿಕಾರರಾಗಿ ಹೊರಬಂದರು.
ಬೀದಿ ಬಿಂಬ ರಂಗದ ತುಂಬ (೨೦೧೧), ಪುರಹರ (೨೦೧೨) ಈ ನಾಟಗಳನ್ನು ಇವರು ರಚಿಸಿ ನಿರ್ದೇಶಿಸಿದ್ದಾರೆ. ೨೦೧೪ ರಲ್ಲಿ ಇವರ ’ಕರ್ಮ’ ಕಾದಂಬರಿ ಪ್ರಕಟವಾಯಿತು.
೨೦೧೫ರಲ್ಲಿ ಇವರ ಎರಡನೇ ಕಾದಂಬರಿ "ನನ್ನಿ" ಪ್ರಕಟವಾಗಿ ಪೂರ್ಣ ಪ್ರಮಾಣದ ಕನ್ನಡ ಕಾದಂಬರಿಕಾರರಾಗಿ ರೂಪುಗೊಂಡಿದ್ದಾರೆ. ವೈಚಾರಿಕ ಸಾಹಿತ್ಯವನ್ನು ತಮ್ಮ
ಕ್ಷೇತ್ರವನ್ನಾಗಿರಿಸಿಕೊಂಡಿರುವ ಇವರು ಇಂಟರ್ಫೇಸ್ ಡಿಸೈನಿಂಗ್ ಸಂಬಂಧಿತ ವೃತ್ತಿಮಾಡುತ್ತಿದ್ದು, ಅದರ ಹೊರತಾಗಿ ಸಾಹಿತ್ಯ ಅಧ್ಯಯನ ಮತ್ತು ಬರವಣಿಗೆಯಲ್ಲಿ ತಮ್ಮನ್ನು
ತೊಡಗಿಸಿಕೊಂಡಿದ್ದಾರೆ.--