ಪ್ರೊ. ಎಂ.ಎ.ಹೆಗಡೆ
ಜೀವನ ವಿವರ :
ಪ್ರೊ. ಎಂ.ಎ.ಹೆಗಡೆಯವರ ,ಹೆಸರು : ಮಹಾಬಲೇಶ್ವರ , ಹುಟ್ಟಿದ ಊರು : ದಂಟಕಲ್ (ತಾಯಿಯ ತವರುಮನೆ);
ಜನ್ಮ ದಿನಾಂಕ ೩-೭-೧೯೪೮. ಈಗಿನ ವಾಸ ಶಿರಸಿಯಲ್ಲಿ.; ತಂದೆ : ಅಣ್ಣಪ್ಪ ಹೆಗಢೆ ಮತ್ತು ತಾಯಿ : ಕಾಮಾಕ್ಷಿ ಊರು: ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆ
ವಿದ್ಯಾಭ್ಯಾಸ :
ಪ್ರೊ. ಎಂ.ಎ.ಹೆಗಡೆಯವರ ಪ್ರೌಢಶಾಲಾ ವಿದ್ಯಾಭ್ಯಾಸ , ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ನಡೆಯಿತು, ಎಂ.ಎಂ. ಆರ್ಟ್ಸ್ ಕಾಲೇಜು ಶಿರಸಿಯ ಎಂ. ಎಂ.ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ.ಪದವಿ ಮತ್ತು ಅವರ ಎಂ.ಎ. ಉನ್ನತ ಪದವಿ ಶಿಕ್ಷಣವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ೧೯೭೧ ರಲ್ಲಿ ಆಯಿತು. ಬಿ.ಎ. ಪದವಿಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಶ್ರೀ ಬಿ.ವಿ.ಬೇವೂರ ಅವರ ಬಹುಮಾನ ಲಭಿಸಿದೆ. ಎಂ.ಎ.ಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಸಿ.ಡಿ. ದೇಶಮುಖ್ ಬಹುಮಾನ ಲಭಿಸಿದೆ.
ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ...