ಮಲ್ಲಿಕಾರ್ಜುನ ಹಿರೇಮಠ
ಶ್ರೀ ಮಲ್ಲಿಕಾರ್ಜುನ ಹಿರೇಮಠ ಅವರನ್ನು ಮುಖ್ಯವಾಗಿ ಕಥೆಗಾರ ಕಾದಂಬರಿಕಾರ ಎಂದೇ ಗುರುತಿಸಲಾಗುತ್ತದೆ. ಆದರೆ ಅವರ ಸಾಹಿತ್ಯಕೃಷಿಗೆ ಸಂಬಂಧಪಟ್ಟಂತೆ, ಕವಿತೆಯೂ ಅವರ ಇನ್ನೊಂದು ಮಾಧ್ಯಮವಾಗಿದ್ದದ್ದು ತಿಳಿಯುತ್ತದೆ. ಅನೇಕ ಲೇಖಕರು ತಮ್ಮ ಬರವಣಿಗೆಯನ್ನು ಪ್ರಾರಂಭ ಮಾಡಿರುವುದು ಕಾವ್ಯಮಾಧ್ಯಮದಿಂದಲೇ . ಎಲ್ಲ ಹೊಸ ಬರಹಗಾರರಿಗೆ ತಮ್ಮನ್ನು ಕವಿಯೆಂದು ಗುರುತಿಸಬೇಕೆಂಬ ಅದಮ್ಯ ಅಪೇಕ್ಷೆ ಇರುತ್ತದೆ. ಇದಕ್ಕೆ ಹೊರತಲ್ಲ ಎನ್ನುವಂತೆ ಮಲ್ಲಿಕಾರ್ಜುನ ಅವರ ಸೃಜನಶೀಲ ಸ್ರೋತ ಕೂಡ ಆರಂಭವಾದದ್ದು ಕವಿತೆಯಿಂದಲೇ.