ಮಿತ್ರಾ ವೆಂಕಟ್ರಾಜ
೧೧-೭-೧೯೪೮
ಕುಂದಾಪುರ
ಶ್ರೀಮತಿ ಮಿತ್ರಾ ವೆಂಕಟರಾಜ ಅವರು ಬಿ.ಎಸ್.ಸಿ. ಪದವಿಧರೆ ಯಾಗಿದ್ದು ಸುಮಾರು ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಮನೋಹರ ಗ್ರಂಥಮಾಲೆಗಾಗಿ ಈ ಕಾದಂಬರಿ ರಚಿಸಿ ಕೊಟ್ಟಿದ್ದಾರೆ.
ಪ್ರಕಟಿತ ಕೃತಿಗಳು : ೧. ರುಕುಮಾಯಿ - (ಕಥಾಸಂಕಲನ)
೨. ಹಕ್ಕಿ ಮತ್ತು ಅವಳು - (ಕಥಾಸಂಕಲನ)
ಪ್ರಶಸ್ತಿ :
· ‘ಒಂದು ಒಸಗೆ ಒಯ್ಯುವುದಿತ್ತು’ ಕತೆಗೆ - ದಿಲ್ಲಿಯ ‘ಕಥಾ’ ಪ್ರಶಸ್ತಿ
· ‘ಹಕ್ಕಿ ಮತ್ತು ಅವಳು’ ಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
· ಅಖಿಲ ಕರ್ನಾಟಕ ಲೇಖಕಿಯರ ಸಂಘದ ಸಾವಿತ್ರಮ್ಮ ದತ್ತಿನಿಧಿ-- ಪ್ರಶಸ್ತಿ
· ಕಾಂತಾವರದ ವರ್ಧಮಾನ ಸಾಹಿತ್ಯ ಪ್ರಶಸ್ತಿ
· ಸಂಕಲನವು ಮಂಗಳೂರು ವಿ.ವಿ.ಯ ಪದವಿ ತರಗತಿಗೆ ಪಠ್ಯಪುಸ್ತಕವಾಗಿತ್ತು.