ನಾ. ದಾಮೋದರ ಶೆಟ್ಟಿ
ಅವರು ಬಹುಮುಖ ಪ್ರತಿಭೆಯ ಕವಿ,ನಾಟಕಕಾರ, ನಟ ಹಾಗೂ ಅಂಕಣಕಾರರಾಗಿ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಳೆದ ಮೂರ್ನಾಲ್ಕು ದಶಕಗಳಿಂದ ಕರಾವಳಿಯ ಸಾಹಿತ್ಯ ರಂಗ ಕ್ಷೇತ್ರದಲ್ಲಿ ಮನೆಮಾತಾಗಿದ್ದಾರೆ.
ಪ್ರಕಟಿತ ಕೃತಿಗಳು :
‘ಮುದ್ದಣನ ಶಬ್ದಪ್ರತಿಭೆ’ ಸಂಪ್ರಬಂಧಕ್ಕೆ ಮಂಗಳೂರು ವಿ.ವಿ. ದಿಂದ ಪಿಎಚ್.ಡಿ.
ದೇವರ ವಿಕರಾಳಗಳು, ಅಶ್ವತ್ಥಾಮ, ಬಾಲ್ಯದ ನೆನಪುಗಳು (ಅನುವಾದಿತ ಕಾದಂಬರಿಗಳು)
ಕರಿಯ ದೇವರ ಹುಡುಕಿ, ಭತ್ತದ ಕಾಳುಗಳು, ಸಾಕ್ಷಾತ್ಕಾರ, ಭರತ ವಾಕ್ಯ (ಅನುವಾದಿತ ನಾಟಕಗಳು)
ಜಿ. ಶಂಕರ ಕುರುಪ್, ಪೇಜಾವರ ಸದಾಶಿವರಾಯ, ಮುದ್ದಣ, ನಾರಾಯಣ ಗುರು, ಅಮೃತ ಸೋಮೇಶ್ವರ, ಕೆ. ಎನ್. ಟೇಲರ್, ಕೆ. ವಿ. ಸುಬ್ಬಣ್ಣ (ವ್ಯಕ್ತಿ ವಿವರ)
ಸುಳುಹಿನೊಳಗೆ, ಸರದಿ (ಸ್ವತಂತ್ರ ಕಾದಂಬರಿಗಳು), ಪ್ರಜೆ, ಹೂಮನಸು, ಅರ್ಪಣೆ (ಸ್ವತಂತ್ರ ನಾಟಕಗಳು)
ಒಡೆದ ಮುತ್ತುಗಳು, ಇಂಗ್ಲೆಂಡ್ ಕವನಗಳು, ಹಾಡು ಮನವೆ ಹಾಡು, ದೇಶಭಕ್ತಿ ಗೀತೆಗಳು, ತಟ್ಟಿಯೊಳಗಿನ ಜೀವ (ಕವನ ಸಂಕಲನಗಳು)
ಸಿರಿ ನಿವಾಸ, ಅಪ್ರಮೇಯ, ಪೊಲಿ, ಸ್ವಾತಂತ್ರ್ಯದ ಸ್ವರ್ಣಹೆಜ್ಜೆ, ಸಂಕಥನ, ಅದ್ಭುತ ರಾಮಾಯಣ, ಕರಾವಳಿ ಕಮ್ಮೆನ (ಸಂಪಾದಿತ ಕೃತಿಗಳು)
ರಂಗಶೋಧನ (ರಂಗ ವಿಮರ್ಶೆ)
‘ಭೂಮಿಕಾ’ ನಾಟಕ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ೫೦ರಷ್ಟು ನಾಟಕಗಳ ನಿರ್ದೇಶನ. ವಿದೇಶಗಳಲ್ಲಿ ಯಕ್ಷಗಾನ, ಭರತನಾಟ್ಯಗಳನ್ನು ಪ್ರದರ್ಶನಕ್ಕಿಟ್ಟ ಗರಿಮೆ.
ಮೌಲ್ಯಾಧಾರಿತ ಸಿನಿಮಾಗಳ...