ನಾಗೇಶ್ ಕುಮಾರ್ ಸಿಎಸ್
ನಾಗೇಶ್ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದು, ಹವ್ಯಾಸಿ ಕತೆ-ಕಾದಂಬರಿಕಾರರಾಗಿದ್ದಾರೆ. ಇವರ ಹಲವಾರು ಕಿರು ಕಾದಂಬರಿ ಮತ್ತು ಸಣ್ಣ ಕತೆಗಳು ಕನ್ನಡದ ಅಗ್ರಪಂಕ್ತಿಯ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ, ಕರ್ಮವೀರ ಮುಂತಾದವಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದಿವೆ. ಚುರುಕಾದ ಪತ್ತೇದಾರಿ ಮತ್ತು ಮನರಂಜನಾ ಸಾಹಿತ್ಯದಲ್ಲಿ ಕೇಳಿಬರುತ್ತಿರುವ ಇತ್ತೀಚಿನ ಹೆಸರು ಇವರದು.