ನಿಂಗಣ್ಣ ಕುಂಟಿ
ತುಂಗಭದ್ರಾ ತೀರದ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಕುಂಟಿಯವರು ಒಂದು ದೃಷ್ಟಿಯಿಂದ ಪಾದರಸದಷ್ಟು ಚುರುಕಿನವರು. ವಿದ್ಯಾರ್ಥಿದೆಶೆಯಲ್ಲಿರುವಾಗ ವರಕವಿ ದ.ರಾ.ಬೇಂದ್ರೆಯವರಿಂದ ಪುಟ್ಟ ಬೇಂದ್ರೆ ಎಂದು ಕರೆಯಿಸಿಕೊಂಡವರು. ಸಾಹಿತ್ಯ ಲೋಕದ ಬಲಭೀಮರೆಂದೆನಿಸಿಕೊಂಡಿದ್ದ ರಾ.ಯ.ಧಾರವಾಡಕರ ಅವರನ್ನು ತುಂಗಭದ್ರಾ ನದಿಯಲ್ಲಿ ಈಜಲು ಅನುಕೂಲ ಮಾಡಿಕೊಟ್ಟವರು. ತಾವು ಕೆಲಸ ಮಾಡಿದ ಊರುಗಳಲ್ಲಿ ಶಾಲೆಗೆ ಸಹಾಯಧನ ವಸೂಲು ಮಾಡಿಸಿ ತಮ್ಮ ಹೆಜ್ಜೆಗುರುತನ್ನು ಉಳಿಸಿದವರು. ತಾಯಿ ಕುಂಟಿ ತಿಪ್ಪವ್ವನಿಂದ ಸ್ವಾಭಿಮಾನದ, ಯಾರಿಗೂ ಬಗ್ಗದ ಎದೆಗಾರಿಕೆ ಪಡೆದುಕೊಂಡವರು.