ಪಡುಕೋಣೆ ಪ್ರಭಾಶಂಕರ
ನಾನು ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ. ನನ್ನ ತಂದೆ ಪಡುಕೋಣೆ ರಮಾನಂದ ರಾಯರು. ರಸಾಯನಶಾಸ್ತ್ರದ ಪದವೀಧರರು, ಆ ವಿಷಯವನ್ನೇ ಕಾಲೇಜಿನಲ್ಲಿ ಬೋಧಿಸುತ್ತಿದ್ದರು. ತಾಯಿ, ಸಹಕಾರ ತತ್ವವನ್ನು ದಕ್ಷಿಣ ಕನ್ನಡದ ಜನರಿಗೆ ಪ್ರಪ್ರಥಮವಾಗಿ ಪರಿಚಯಿಸಿದ, ಪುತ್ತೂರಿನ ಪ್ರಸಿದ? ಸಮಾಜ ಸೇವಕ ಮೊಳಹಳ್ಳಿ ಶಿವರಾಯರ ಪ್ರಥಮ ಪುತ್ರಿ ಸುಶೀಲಾ (ಸೀತಾ). ಇಬ್ಬರೂ ಉತ್ತಮ ಸಂಸ್ಕಾರ, ಜೀವನದ ಮೌಲ್ಯಗಳನ್ನು ಪಡೆದು ಬಂದವರು. ಇಬ್ಬರಿಗೂ ಸಂಗೀತ, ಸಾಹಿತ್ಯ , ನಾಟಕ ಕಲೆಗಳಲ್ಲಿ ಆಸಕ್ತಿ ಇದ್ದುದರಿಂದ ನಮ್ಮ ಮನೆಯಲ್ಲಿ ಉತ್ತಮ ಕನ್ನಡ, ಇಂಗ್ಲೀಷ? ಗ್ರಂಥಗಳೂ ಪತ್ರಿಕೆಗಳೂ ಬೇಕಾದಷ್ಟು ಇದ್ದವು.