ಪ್ರಸನ್ನ :-
ಪ್ರಸನ್ನ, ಸಾಹಿತಿ, ರಂಗ ನಿರ್ದೇಶಕ. ಜನನ, ೨೩-೩-೧೯೫೧, ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮ. ಶ್ರೀಯುತರು ಸಮುದಾಯ ಚಳುವಳಿಯನ್ನು ಕರ್ನಾಟಕದಾದ್ಯಂತ ಕಟ್ಟಿ ಬೆಳೆಸಿದವರು, ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೕಶಿಸಿದವರು ಹಾಗೂ ನೂರಾರು ನಟರನ್ನು ತರಬೇತಿಗೊಳಿಸಿದವರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಅತಿಥಿ ಅಧ್ಯಾಪಕರಾಗಿ ಹಾಗೂ ಅತಿಥಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ರೆಪರ್ಟರಿ ತಂಡ, ದೆಹಲಿ, ಇವರಿಗೆ ಹಲವಾರು ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಹಿತಿ ಮಾಹಿತಿ ಸಂಗ್ರಹಣೆ’ ಯೋಜನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
‘ನಟನೆಯ ಪಾಠಗಳು’ ಎಂಬ ಇವರ ಪುಸ್ತಕವು ಸಮಕಾಲೀನ ರಂಗನಟರ ತರಬೇತಿಗೆ ಮಹತ್ವದ ಕೊಡುಗೆಯಾಗಿರುತ್ತದೆ.
ಶ್ರೀಯುತರು ಎರಡು ಕಾದಂಬರಿ (ನೌಟಂಕಿ, ಬಾಲಗೋಪಾಲ) ಎರಡು ಕವನ ಸಂಕಲನ (ಮಾಗಿ, ದೇವದಾರು), ಒಂಬತ್ತು ನಾಟಕಗಳು (ಒಂದು ಲೋಕಕಥೆ, ತದ್ರೂಪಿ, ದಂಗೆಯ ಮುಂಚಿನ ದಿನಗಳು, ಮಹಿಮಾಪುರ, ಉಲಿ, ಜಂಗಮದ ಬದುಕು, ಹದ್ದು ಮೀರಿದ ಹಾದಿ, ಕೊಂದವರಾರು ಹಾಗೂ ಪುರುಷಾರ್ಥ) ಮೂರು ವಿಮರ್ಶಾ ಗ್ರಂಥಗಳು (ನಾಟಕ-ರಂಗಕೃತಿ, ದೇಸಿ ಜೀವನ ಪದ್ಧತಿ, ಯಂತ್ರಗಳನ್ನು ಕಳಚೋಣ ಬನ್ನಿ) ರಚಿಸಿದ್ದಾರೆ. ಹ್ಯಾಮ್ಲೆಟ್ ಹಾಗೂ ಮನ್ಮಥ ವಿಜಯ ಇವರ ಅನುವಾದಿತ ಕೃತಿಗಳು.
ಹಲವು ದೇಶಗಳನ್ನು ಸ...