ಡಾ. ಪುರುಷೋತ್ತಮ
ಡಾ. ಪುರುಷೋತ್ತಮ ಬಿಳಿಮಲೆಯವರು ಸಮಕಾಲೀನ ಚಿಂತಕರಲ್ಲಿ ಒಬ್ಬರು. ಕಾಲೇಜು, ವಿಶ್ವವಿದ್ಯಾಲಯ ಹೀಗೆಯೇ ಜಾಗತಿಕಮಟ್ಟದ ವಿಶ್ವವಿದ್ಯಾಲಯಗಳ ಬೌದ್ಧಿಕತೆಯ ನಿಯಂತ್ರಿಸುವ ಪ್ರಮುಖ ಹುದ್ದೆಯನ್ನು ನಿರ್ವಹಿಸುವ ಹೊಣೆಗಾರಿಕೆಯುಳ್ಳವರು. ಬಿಳಿಮಲೆಯವರು ದೇಶದ ರಾಜಧಾನಿಯಲ್ಲಿ ಕುಳಿತು ಜಾಗತಿಕ ವಿದ್ಯಮಾನಗಳ ಕಡೆಗೆ ದೃಷ್ಟಿ ಹಾಯಿಸುತ್ತ ಅಂತಾರಾಷ್ಟ್ರೀಯ ನೆಲೆಯ ಸಂಗತಿಗಳಿಗೂ ಮಾನವೀಯ ಸ್ಪರ್ಶವನ್ನು ಕೊಡಬಲ್ಲ ಸಮರ್ಥ ಲೇಖಕರು. ಇಂತಹ ಉನ್ನತಸ್ತರದ ಚಿಂತನೆಯ ನಡುವೆ ಹಳ್ಳಿಗಾಡಿನಲ್ಲಿ ಬಾಲ್ಯದ ಗೆಳೆಯರೊಡಗೂಡಿ ಬಣ್ಣಹಚ್ಚಿ ಯಕ್ಷಗಾನ ಕುಣಿದ ಆತ್ಮೀಯ ಸಂದರ್ಭವನ್ನು ಮೆಲಕು ಹಾಕಬಲ್ಲರು.