ರಾಶಿ'
'ರಾಶಿ' ಎಂದೇ ಪ್ರಸಿದ್ದರಾಗಿರುವ ರಾಮಸ್ವಾಮಯ್ಯ ಶಿವರಾಂ(೧೯೦೪ - ೧೯೮೪) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತ್ತಿಯಿಂದ ವೈದ್ಯರಾದರೂ ಕೊರವಂಜಿಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.
ವಿದ್ಯಾರ್ಥಿ ಜೀವನ
ಬಡತನದಲ್ಲಿಯೇ ೧೯೨೫ ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಬಿ.ಎ. ಮಾಡಿದ ನಂತರ ಎಂ.ಎ. ಮಾಡಿ ಮುಂದಕ್ಕೆ ಎಂ.ಬಿ.ಬಿ.ಎಸ್. ಮಾಡು ಎನ್ನುವ ಸಲಹೆ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ನವರು ಇತ್ತರು. ಶಿವರಾಂ ಮೆಡಿಕಲ್ ಕಾಲೇಜನ್ನೇ ಸೇರಿದರು. ವೈದ್ಯಕೀಯ ಓದುವಾಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ. ಏತನ್ ಮದ್ಯೆ ತಂದೆಯನ್ನು ಕಳೆದುಕೊಂಡರು. ದೊಡ್ಡ ಪರಿವಾರದ ಜವಾಬ್ದಾರಿ ಹಿರಿ ಮಗನಾದ ಶಿವರಾಂ ಹೆಗಲಿಗೆ ಏರಿತ್ತು. ನಾಗಮ್ಮ ಎಂಬುವರೊದನೆ ವಿವಾಹವೂ ಜರುಗಿತ್ತು.
ಹಣದ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಸಿನೆಮಾ ರಂಗಕ್ಕೆ ಸೇರಲು ಪ್ರಯತ್ನಿಸಿದರು. ವ್ಯಾಯಾಮ ಪಟು, ಸಾಹಿತಿ ಕೆ.ವಿ.ಅಯ್ಯರ್ ರವರಿಂದ ಫೋಟೊ ತೆಗೆಸಿಕೊಂಡು 'ಮೃಚ್ಚಕಟಿಕಾ' ಎನ್ನುವ ಸಿನೆಮಾ ತೆಗೆಯುತ್ತಿದ್ದ ಭವನಾನಿಯವರಿಗೆ ಕೊಟ್ಟರು. ಒಂದು ಸಣ್ಣ ಪಾರ್ಟೂ ಸಿಕ್ಕಿತ್ತು. ಆದರೆ ಟಿ.ಪಿ.ಕೈಲಾಸಂ ರವರು ಶಿವರಾಂರವರಿಗೆ ಬುದ್ದಿ ಹೇಳಿ ಮತ್ತೇ ವೈದ್ಯಕೀಯ ಶಿಕ್ಷಣ ಮುಂದುವರೆಸುವಂತೆ ಪ್ರೇರೇಪಿಸಿದರು. ಇದರ ಫಲವಾಗಿ ೧೯೩೦ ರಲ್ಲಿ ಶಿವರಾಂ ಡಾ.ಶಿವರಾಂ ಆದರು.
ರಾ...