Ravindra Koppar
ರವೀಂದ್ರ ಕೊಪ್ಪರ್
ಮೂಲತಃ ಲಕ್ಷ್ಮೇಶ್ವರದ ಪ್ರತಿಷ್ಠಿತ ಕೊಪ್ಪರ್ ಮನೆತನದ ರವೀಂದ್ರ ಕೊಪ್ಪರ್ ಅವರು ತತ್ವಶಾಸ್ತ್ರ ಮತ್ತು ಇಂಗ್ಲೀಷ್ ಸಾಹಿತ್ಯದ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿ, ತರ್ಕಶಾಸ್ತ್ರ, ಮನಶ್ಯಾಸ್ತ್ರ, ತತ್ವಶಾಸ್ತ್ರ, ಇಂಗ್ಲೀಷ್ ವಿಷಯಗಳಲ್ಲಿ 35 ವರ್ಷಗಳ ಸುದೀರ್ಘ ಬೋಧನೆ, 25ಕ್ಕೂ ಅಧಿಕ ಪಠ್ಯಪುಸ್ತಕಗಳ ರಚನೆ, ಪತ್ರ ಲೇಖನ, ಪ್ರವಾಸಿ ಮಾರ್ಗದರ್ಶಿಗಳು, ಜೀವನ ವೃತ್ತಾಂತ, ಕವನ-ಪ್ರಬಂಧ-ಪ್ರಹಸನ ಸಂಕಲನಗಳು, ನಾಟಕಗಳು ಮೊದಲಾಗಿ ಹಲವು ಸಾಮಾನ್ಯ ಉಪಯುಕ್ತ ಕೃತಿಗಳು, ಅಂಕಣ ಬರಹ, ವಿಷಯಕ ಪ್ರಬಂಧಗಳು, ವ್ಯಕ್ತಿಚಿತ್ರ ಲೇಖನಗಳು - ಹೀಗೆ ವೈವಿಧ್ಯಮಯ ಬರಹದಲ್ಲಿ ಸಾಧನೆ ಮಾಡಿದ್ದಾರೆ.
ಕಾರ್ಮಿಕ ನಾಯಕರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯದ ಬಾಲಕಾರ್ಮಿಕ ವಿರೋಧಿ ಆಂದೋಲನದ ಕಾರ್ಯಕಾರಿಣಿ ಸದಸ್ಯರಾಗಿ, ಪತ್ರಕರ್ತರಾಗಿ, ಮಕ್ಕಳ ಹಕ್ಕುಗಳ ಕ್ರಿಯಾಸಮಿತಿಯ ಜಿಲ್ಲಾಧ್ಯಕ್ಷರಾಗಿ, ಪರಿಸರ ಪ್ರೇಮಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಗದಗ ಜಿಲ್ಲಾ ಗ್ರಾಮೀಣ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾಗಿ, ಗದುಗಿನ ಪಂಚಾಕ್ಷರ ಯುವಕ ಮಂಡಳದ ನಿರ್ದೇಶಕರಾಗಿ, ಗದಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇಂಗ್ಲೀಷ್ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು, ಸಮಾವೇಶಗಳನ್ನು ಸಂಘಟಿಸಿ ವಿಧಾಯಕ ಕಾರ್ಯಗಳನ್ನು ಮಾಡಿದ್ದಾರೆ.
View Books