ಎಸ್. ಎಫ್. ಯೋಗಪ್ಪನವರ್
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಜನನ. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ೧೯೭೨ರಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. `ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ' (ಕಾದಂಬರಿ-೧೯೮೨). `ಆರಾಮಕುರ್ಚಿ ಇತರೆ ಕತೆಗಳು' (ಸಣ್ಣಕಥಾ ಸಂಕಲನ-೧೯೯೬), ಪಿ. ಲಂಕೇಶ್ ಜೊತೆಗೂಡಿ `ರೂಪಕ ಲೇಖಕರು' (೨೦೦೮), `ಒಂದು ಶಹರದ ಸುತ್ತ' (ನಾಟಕ-೨೦೧೨), `ಮಾಯಾಕನ್ನಡಿ-ಚಾರ್ಲ್ಸ್ ಬೋದಿಲೇರ್ ಐವತ್ತು ಗದ್ಯ ಕವಿತೆಗಳು' (ಅನುವಾದ-೨೦೧೩). `ಪ್ರೀತಿ ಎಂಬುದು ಚಂದ್ರನ ದಯೆ' (ಕಾದಂಬರಿ-೨೦೧೫), `ಹದಿಹರೆಯದ ಒಬ್ಬಂಟಿ ಪಯಣ' (ಜೆ. ಡಿ. ಸ್ಯಾಲಿಂಜರ್ನ `ದಿ ಕ್ಯಾಚ ಇನ್ ದಿ ರೈ' ಕಾದಂಬರಿಯ ಅನುವಾದ-೨೦೧೬) ಕೃತಿಗಳ ಪ್ರಕಟಣೆ. ೧೯೭೪ ರಿಂದ ೨೦೦೭ರವರೆಗೆ ಕರ್ನಾಟಕ ಅಡಳಿತ ಸೇವೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯ.