ಲೆ. ಜ. ಸರದೇಶಪಾಂಡೆಯವರು ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಸ್ವಯಂ ನಿವೃತ್ತಿ ಹೊಂದಿದವರು. ಅವರ ಸಾಹಿತ್ಯ ಕೃಷಿಯ ಒಲವು ಅವರನ್ನು ಲೇಖಕರನ್ನಾಗಿ ರೂಪಿಸಿದೆ.. ಸೃಜನ ಶೀಲ ಸಾಹಿತ್ಯದ ಜೊತೆಗೆ ಭಾರತ ದೇಶದ ವಿವಿಧ ಸಂರಕ್ಷಣಾತ್ಮಕ ನೀತಿಗಳ ಬಗ್ಗೆಯೂ ಜನರಿಗೆ ಅರಿವು ಇರಬೇಕೆಂಬ ದೃಷ್ಟಿಯಿಂದ ತಮ್ಮ ಲೇಖನಿಯನ್ನು ಅತ್ತ ಕಡೆಗೆ ಕೇಂದ್ರೀಕರಿಸಿದರು. ಹೀಗಾಗಿ ಅವರ ಇಂಥ ಕೃತಿಗಳು ಜನರಲ್ಲಿ ದೇಶದ ಸಂರಕ್ಷಣೆಯಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಾರ್ಥಕವಾಗುತ್ತವೆ.