ಶ್ರೀ ಎಸ್.ಆರ್. ವಿಜಯಶಂಕರ ಇಂಟೆಲ್ ಟೆಕ್ನಾಲಜಿ ಎಂಬ ಕಂಪ್ಯೂಟರ್ ಚಿಪ್ ತಯಾರಿಕಾ ಸಂಸ್ಥೆಯ ದಕ್ಷಿಣ ಏಷ್ಯಾ ಘಟಕಕ್ಕೆ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಅವರು ಎಚ್ಎಂಟಿ ಲಿಮಿಟೆಡ್, ನಾವ್ಹೆಲ್ ಸಾಪ್ಟ್ ವೇರ್, ಸಿಸ್ಕೋ ಸಿಸ್ಟಮ್ಸ್ ಮೊದಲಾದ ಕೈಗಾರಿಕಾ ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ಈಗ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಭಾನುವಾರ `ಹೂ ಬೆರಳು' ಎಂಬ ಸಾಹಿತ್ಯ, ಸಂಸ್ಕೃತಿ, ಸಮಾಜಗಳಿಗೆ ಸಂಬಂಧಿಸಿದ ಅಂಕಣವನ್ನು ಬರೆಯುತ್ತಿದ್ದಾರೆ.