ಶ್ರೀನಿವಾಸ ವೈದ್ಯ -
ಶ್ರೀನಿವಾಸ ವೈದ್ಯರು ಕನ್ನಡದ ಖ್ಯಾತ ಸಾಹಿತಿಗಳು”’.
ಶ್ರೀನಿವಾಸ ವೈದ್ಯರು ಜನಿಸಿದ್ದು ಏಪ್ರಿಲ್ ೪,೧೯೩೬ರಂದು,ಧಾರವಾಡ ಜಿಲ್ಲೆಯ ನವಲಗುಂದದಲ್ಲಿ.
ತಂದೆ, ಶ್ರೀ ಬಿ.ಜಿ. ವೈದ್ಯ (ಧಾರವಾಡದ ಪ್ರಸಿದ್ಧ ವಕೀಲರು) ಮತ್ತು ತಾಯಿ, ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ (ಸ್ವಾತಂತ್ರ್ಯ ಹೋರಾಟಗಾರರು, ಪ್ರಸಿದ್ಧ ವಕೀಲರು, ಕನ್ನಡ ನಾಡು ನುಡಿಗಾಗಿ ಹೋರಾಡಿದ ಶ್ರೀರಾಮರಾವ್ ನರಗುಂದಕರ ಅವರ ಮಗಳು).ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , ಅಲ್ಲಿ “ಸಂವಾದ” ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಿ ನಡೆಯಿಸಿಕೊಂಡು ಬಂದಿದ್ದಾರೆ. ನಾಡಿನ ಖ್ಯಾತ ಬರಹಗಾರರಿಂದ ಭಾಷಣ, ಸಂವಾದ, ವಾಚನ ಮತ್ತು ಇತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.
ಇವರ ಕೆಲವು ಕೃತಿಗಳು ಇಂತಿವೆ:
ತಲೆಗೊಂದು ತರತರ (ಲಲಿತ ಪ್ರಬಂಧಗಳು) ೧೯೯೪ - ಮೊದಲೆರೆಡು ಆವೃತ್ತಿಗಳ ಪ್ರಕಾಶಕರು, ಸುವಿದ್ಯಾ ಪ್ರಕಾಶನ ಬೆಂಗಳೂರು. ಮೂರನೇಯ ಆವೃತ್ತಿ ‘ಅಂಕಿತ ಪುಸ್ತಕ’ ಬೆಂಗಳೂರು.
ಮನಸುಖರಾಯನ ಮನಸು (ಕತೆ, ಹರಟೆ ಇತ್ಯಾದಿ) ೧೯೯೭ - ಮನೋಹರ ಗ್ರಂಥಮಾಲಾ ಧಾರವಾಡ. ಸಧ್ಯದವರೆಗೆ ನಾಲ್ಕು ಆವೃತ್ತಿಗಳು.
ರುಚಿಗೆ ಹುಳಿಯೊಗರು (ಲಲಿತ ಪ್ರಬಂಧಗಳು) ೨೦೦೩ - ಅಂಕಿತ ಪುಸ್ತಕ, ಬೆಂಗಳೂರು. ಸಧ್ಯದವರೆಗೆ ಎರಡು ಆವೃತ್ತಿಗಳು.
ಹಳ್ಳ ಬಂತು ಹಳ್ಳ (ಕಾದಂಬರಿ) ೨೦೦೪ - ಮನೋಹರ ಗ್ರಂಥಮಾಲಾ, ...