ಶ್ರೀಮತಿ ಶ್ಯಾಮಲಾ ಕುಲಕರ್ಣಿ ಅಧ್ಯಾಪಕಿ, ಲೇಖಕಿ ಅಷ್ಟೇ ಅಲ್ಲ; ಕವಿಯಿತ್ರಿಯೂ ಹೌದು. ಸಾಹಿತ್ಯ ಸಂಗೀತ ಕಲೆಗಳಲ್ಲಿ ಮಹತ್ಸಾಧನೆ ಗೈದ ಇವರು ಮಹಿಳಾ ಮಂಡಲದ ಸದಸ್ಯತ್ವ ಸಹಿತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ಕೈಗೊಂಡು ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ ಖ್ಯಾತಿ ಇವರದು. ಇದಲ್ಲದೆ ತಮ್ಮಲ್ಲಿದ್ದ ಕಲಾ ಪ್ರತಿಭೆಯನ್ನು ಇಂಬುಗೊಳಿಸಿ ಅದನ್ನು ಶಿಷ್ಯವೃಂದದಲ್ಲಿ ಧಾರೆ ಎರೆದ ಶ್ರೇಯವೂ ಇವರಿಗೆ ಸಂದಿದೆ, ಗಣೇಶ ಚತುರ್ಥಿ, ರಾಜ್ಯೋತ್ಸವ, ದಾಸರ ಆರಾಧನೆ, ನವರಾತ್ರಿ, ಇಂತಹ ಸಂದರ್ಭಗಳ ಕಾರ್ಯಕ್ರಮಗಳಲ್ಲಿ, ಚಿನ್ಮಯ ಮಿಶನ್, ರಾಮಕೃಷ್ಣ ಆಶ್ರಮಗಳು ನಿಯೋಜಿಸಿದ ಸಭೆಗಳಲ್ಲಿ ಸಂಗೀತ ಸಂಯೋಜಿಸಿ ಪ್ರಸ್ತುತಪಡಿಸುವದರಲ್ಲಿಯೂ ಇವರ ನೈಪುಣ್ಯತೆ ವಿಖ್ಯಾತಿಗೊಂಡಿದೆ.