ಶ್ರೀ ಉಮೇಶ ಮುನವಳ್ಳಿ
ಶರಣರ ವಚನ ಪಥದಲ್ಲಿಯೇ ಇಂದಿಗೂ ಕೂಡ ಎಷ್ಟೋ ಜನ ಸಾಹಿತಿಗಳು ವಚನ ರಚನೆಯಲ್ಲಿ ತೊಡಗಿದ್ದಾರೆ. ಅದರಲ್ಲಿ ಶ್ರೀ ಉಮೇಶ ಮುನವಳ್ಳಿಯವರು ಬಹುಮುಖ ಪ್ರತಿಭಾವಂತರು, ಗಾಯಕ, ಲೇಖಕ, ಉಪನ್ಯಾಸಕ, ಈ ಮುಂತಾದ ಸತ್ ಸಾಂಪ್ರದಾಯಿಕ ವ್ಯಕ್ತಿತ್ವ ಉಳ್ಳವರು. ಕನ್ನಡ-ಆಂಗ್ಲ-ಹಿಂದಿ ಈ ತ್ರಿಭಾಷೆಗಳಲ್ಲಿ ಪ್ರಬುದ್ಧವಾಗಿ ಮಾತನಾಡಬಲ್ಲ, ಬರೆಯಬಲ್ಲ ಪ್ರತಿಭೆವುಳ್ಳವರು.