ವಿ. ಗೋಪಕುಮಾರ್
ಹುಟ್ಟಿದ್ದು ಬೆಳೆದದ್ದು ಸಕ್ಕರೆ ನಗರಿ ಮಂಡ್ಯದಲ್ಲಿ. ಮಾತೃಭಾಷೆ ಮಲಯಾಳಂ. ಓದಿದ್ದು ಕನ್ನಡ, ಇಂಗ್ಲೀಷ್, ಶಿಕ್ಷಣ ವಿಷಯಗಳಲ್ಲಿ ಬಿ.ಎ., ಕಂಪ್ಯೂಟರ್, ಪ್ರೋಗ್ರಾಮಿಂಗ್, ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್.
ಫೋಟೋಗ್ರಫಿ, ನ್ಯಾನೋ ಕತೆಗಳ ರಚನೆ, ಕನ್ನಡ ಮತ್ತು ಮಲಯಾಳಂನಲ್ಲಿ ಸಣ್ಣ ಕತೆಗಳ ರಚನೆ. ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ ಇವರ ಹವ್ಯಾಸಗಳು.
ಇತ್ತೀಚೆಗೆ ನಡೆದ ಜನಶ್ರೀ ಕಿರುಚಿತ್ರ ಸರಣಿಯಲ್ಲಿ ಇವರ ನಿರ್ದೇಶನದ ‘ಎರಡು ಪತ್ರಗಳು’ ಎಂಬ ಕಿರುಚಿತ್ರಕ್ಕೆ ‘ಅತ್ಯುತ್ತಮ ಪ್ರಾಯೋಗಿಕ ಕಿರುಚಿತ್ರ’ವೆಂಬ ಪ್ರಶಸ್ತಿ ಸಂದಿದೆ. ಇವರು ಕ್ಲಿಕ್ಕಿಸಿದ ಕೆಲವು ಛಾಯಾಚಿತ್ರಗಳು ಮೈಸೂರಿನ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ.
ಎಂಟು ವರ್ಷಗಳಿಂದ ಮೈಸೂರಿನ “ಮೈಸೂರ್ ಪಬ್ಲಿಕ್ ಸ್ಕೂಲ್”ನಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಪ್ರೀತಾ ಮತ್ತು ಪುತ್ರ ಯದುನಂದನ್ ಇರುವ ನ್ಯಾನೋ ಕುಟುಂಬ.
“ಬೆಳದಿಂಗಳು ಮತ್ತು ಮಳೆ” ನ್ಯಾನೋ ಕಥೆಗಳು ಇವರ ಮೊದಲ ಪುಸ್ತಕ.