ವೈದೇಹಿ
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಫೆಬ್ರವರಿ, ೧೯೪೫ರಂದು ಜನಿಸಿದ ಶ್ರೀಮತಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಬಹುಮುಖ ಪ್ರತಿಭೆಯ ಅಪರೂಪದ ಸಂವೇದನಾಶೀಲ ಲೇಖಕಿ. ಕತೆ, ಕಾದಂಬರಿ, ಕಾವ್ಯ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ‘ಮರ ಗಿಡ ಬಳ್ಳಿ’, ‘ಅಂತರಂಗದ ಪುಟಗಳು’, ‘ಗೋಲ’, ‘ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ’, ‘ಅಮ್ಮಚ್ಚಿ ಎಂಬ ನೆನಪು’, ‘ಕ್ರೌಂಚ ಪಕ್ಷಿಗಳು’ ಕಥಾಸಂಕಲನಗಳು. ‘ಬಿಂದು ಬಿಂದಿಗೆ’, ‘ಪಾರಿಜಾತ’, `ಹೂವ ಕಟ್ಟುವ ಕಾಯಕ’ ಕವನ ಸಂಕಲನಗಳು. ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಕೋ. ಲ. ಕಾರಂತರ ಬದುಕಿನ ನೆನಪುಗಳ ಸಂಗ್ರಹ. ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಬಿ. ವಿ. ಕಾರಂತರ ಬದುಕಿನ ನೆನಪು ಅನುಭವಗಳ ಕಥನ. ಸೇಡಿಯಾಪು ನೆನಪುಗಳು ಮುಂತಾದ ಕೆಲ ಪುಟಗಳು (ಸರಸ್ವತಿಬಾಯಿ ರಾಜವಾಡೆಯವರ ಬದುಕಿನ ನೆನಪುಗಳು) ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳು ಪ್ರಕಟಗೊಂಡಿವೆ. ‘ಕ್ರೌಂಚ ಪಕ್ಷಿಗಳು’ ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿ ಪಡೆದ ಕೃತಿ. ಅವರ ಕತೆ ‘ಗುಲಾಬಿ ಟಾಕೀಸ’ನ್ನು ಆಧರಿಸಿ ಗಿರೀಶ ಕಾಸರವಳ್ಳಿ ನಿರ್ದೇಶಿಸಿದ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿದೆ. ದಾನಚಿಂತಾಮಣಿ ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯಲ್ಲದೆ ನಾಡಿನ ಅನೇಕ ಪ್ರಶಸ್ತಿಗಳು ಲಭಿಸಿವೆ. ಅತ್ತಿಮಬ್ಬೆ ಪ್ರಶಸ್ತಿ, ಎಂ. ಕೆ. ಇಂದಿರಾ ...