ವೀಣಾ ಬನ್ನಂಜೆ
ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಅವರ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು.