ವಿನಯ ಲಾಲ್:
ಜಾನ್ ಹಾಪ್ಕಿನ್ಸ್ ಮತ್ತು ಯುನಿವರ್ಸಿಟಿ ಆಫ್ ಷಿಕಾಗೋಗಳಲ್ಲಿ ಅಭ್ಯಾಸ ಮುಗಿಸಿದ ವಿನಯ ಲಾಲ್ ಪ್ರಸ್ತುತ ಲಾಸ್ ಎಂಜಲೀಸ್ನ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇತಿಹಾಸೇತರ ಸ್ವರೂಪದ ಗತಕಾಲದ ಕಥನಗಳನ್ನು ಕುರಿತು ವಿಶೇಷ ಅಧ್ಯಯನಗಳನ್ನು ಪ್ರಸ್ತುತಪಡಿಸುವ ಅವರ ಈಚಿನ ಪುಸ್ತಕ -- ‘ದಿ ಹಿಸ್ಟರಿ ಆಫ್ ಹಿಸ್ಟರಿ: ಪಾಲಿಟಿಕ್ಸ್ ಎಂಡ್ ಸ್ಕಾಲರ್ಷಿಪ್ ಇನ್ ಮಾಡನ್ ಇಂಡಿಯಾ (ಡೆಲ್ಲಿ: ಆಕ್ಸ್ಫರ್ಡ್, ೨೦೦೩).
ಅಶೀಶ್ ನಂದಿ:
ದೆಹಲಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದು ಈಗ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಿರುವ ಅಶೀಶ್ ನಂದಿ ಅವರು ಸಮಾಜ-ಸಂಸ್ಕೃತಿ-ರಾಜಕಾರಣ ಕುರಿತಂತೆ ಬರೆಯುತ್ತಿರುವ ಭಾರತದ ಚಿಂತಕರಲ್ಲಿ ಪ್ರಮುಖರು. ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅವರ ಕೃತಿಗಳಲ್ಲಿ ಪ್ರಸಿದ್ಧವಾದವು -- ‘ದಿ ಇಂಟಿಮೇಟ್ ಎನಿಮಿ’, ‘ಎಟ್ ದಿ ಎಜ್ ಆಫ್ ಸೈಕಾಲಜಿ’, ‘ದಿ ಇಲ್ಲೆಜಿಟಿಮಸಿ ಆಫ್ ನ್ಯಾಷನಲಿಸ್ಮ್’, ‘ಸ್ಯಾವೇಜ್ ಫ್ರಾಯ್ಡ್’, ‘ರೊಮಾನ್ಸ್ ಆಫ್ ದಿ ಸ್ಟೇಟ್’. ತಮ್ಮನ್ನು ‘ಬೌದ್ಧಿಕ ಬೀದಿಹೋರಾಟಗಾರ’ ಎಂದು ವರ್ಣಿಸಿಕೊಂಡಿರುವ ಇವರ ಬರಹಗಳು ಸಮಕಾಲೀನ ಬೌದ್ಧಿಕ ವಲಯಗಳಲ್ಲಿ ತೀವ್ರ ಚರ್ಚೆ-ವಿವಾದಕ್ಕೂ ಕಾರಣವಾಗಿವೆ.