ವಿವೇಕ ಶಾನಭಾಗ -
ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು. ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು `ಭಾವನಾ' ಹಾಗೂ 'ಪ್ರಜಾ ವಾಣಿ' ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇರಿಕ, ಇಂಗ್ಲೆಂಡ್, ಕಲ್ಕತ್ತಾಗಳಲ್ಲಿ ಹಲವು ವರ್ಷ ವಾಸವಾಗಿದ್ದ ವಿವೇಕ್ ಸದ್ಯ ಬೇಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ ವಿವೇಕ ೪ ಕಥಾಸಂಕಲನಗಳು, ೨ ಕಾದಂಬರಿಗಳು, ೨ ನಾಟಕಗಳು ಹಾಗೂ ೨ ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರು 'ದೇಶಕಾಲ' ಎನ್ನುವ ವಿಶಿಷ್ಟ ಸಾಹಿತ್ಯ ತ್ರೈಮಾಸಿಕವೊಂದನ್ನು ಸಂಪಾದಿಸುತ್ತಿದ್ದಾರೆ.
ಸಾಹಿತ್ಯಇವರ ಕೃತಿಗಳು ಇಂತಿವೆ:
ಕಥಾಸಂಕಲನ :
ಅಂಕುರ
ಲಂಗರು
ಹುಲಿಸವಾರಿ
ಮತ್ತೊಬ್ಬನ ಸಂಸಾರ
ಘಾಚರ್-ಘೋಚರ್
ಕಾದಂಬರಿ :
ಇನ್ನೂ ಒಂದು
ಒಂದು ಬದಿ ಕಡಲು
ಊರು ಭಂಗ
ನಾಟಕ :
ಸಕ್ಕರೆ ಬೊಂಬೆ
ಬಹುಮುಖಿ
ಸಂಪಾದಿತ ಕೃತಿಗಳು:
ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ
ಸಿರಿಗನ್ನಡ - ಇದು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಆಂಥಾಲಜಿ.